ವಿವಿ ಬಗ್ಗೆ


ವಿಭಾಗಗಳು

ಕರಾಮುವಿ ಮೈಸೂರು ಪರಿಚಯ

  • ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಸುಸ್ವಾಗತ (ಕೆ.ಎಸ್.ಓ.ಯು)

    ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವನ್ನು 1ನೇ ಜೂನ್ 1996ರಂದು ಸ್ಥಾಪಿಸಲಾಯಿತು. 12ನೇ ಫೆಬ್ರರವರಿ 1996ರಂದು ಕರ್ನಾಟಕ ರಾಜ್ಯ ಸರ್ಕಾರದಿಂದ ಅಂಗೀಕಾರ ಪಡೆಯಲಾಯಿತು. ಕೆ.ಎಸ್.ಓ.ಯು ಆಕ್ಟ್ 1992ನ್ನು ದೇಶದ ಮುಕ್ತ ವಿಶ್ವವಿದ್ಯಾನಿಲಯಗಳಲ್ಲಿ ಪ್ರಖ್ಯಾತ ಮುಕ್ತ ವಿಶ್ವವಿದ್ಯಾನಿಲಯವೆಂದು ಪರಿಗಣಿಸಲಾಗಿದೆ. ನಮ್ಮ ದೇಶದಲ್ಲಿ ಇರುವ ಶೈಕ್ಷಣಿಕದ ಬೇಡಿಕೆಯನ್ನು ಪರಿಗಣಿಸಿ, ಸಾಮಾನ್ಯವಾಗಿ ಮತ್ತು ಕೆಲವು ಬೇಕಾಗಿರುವಂತಹ ವಿಷಯಗಳನ್ನು ಪರಿಗಣಿಸಿ ಈ ಸಂಸ್ಥೆಯನ್ನು ಸಂಸ್ಥಾಪಿಸಲಾಗಿದೆ.

    ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಮಾನಸಗಂಗೋತ್ರಿ, ಮೈಸೂರಿನಲ್ಲಿ ಇದೆ. ಈ ಕ್ಯಾಂಪಸ್ ಊರಿನ ಮಧ್ಯ ಭಾಗದಿಂದ 5 ಕಿ.ಮಿ. ದೂರದಲ್ಲಿ ಇದೆ. ಇಲ್ಲಿನ ಜಾಗವು ವಿಧ್ಯಾರ್ಥಿಗಳಿಗೆ ಒಳ್ಳೆಯ ವಾತಾವರಣದಿಂದ ಕೂಡಿದೆ. ವಿಶ್ವವಿದ್ಯಾನಿಲಯದಲ್ಲಿ ಪ್ರಸ್ತುತವಾಗಿ ಆಡಳಿತಾತ್ಮಕ ಕಛೇರಿ, ಶೈಕ್ಷಣಿಕ ಬ್ಲಾಕ್, ಗ್ರಂಥಾಲಯ, ಉಪನ್ಯಾಸಕ ಹಾಲ್, ಅತಿಥಿ ಗೃಹ, ಹುಡುಗಿಯರ ವಸತಿನಿಲಯ, ಹುಡುಗರ ವಸತಿನಿಲಯ, ಉಪಹಾರ ಗೃಹ ಮತ್ತು ಹೊರಗಿನಿಂದ ಬಂದ ಇತರೆ ವಿದ್ಯಾರ್ಥಿಗಳಿಗೆ ವಸತಿನಿಲಯವನ್ನು ಹೊಂದಿದೆ.

ಯು.ಜಿ.ಸಿ ಮಾನ್ಯತೆ ಪಡೆದಿರುತ್ತದೆ

ಕೋರ್ಸ್ ಗಳು ಯು.ಜಿ.ಸಿ ಪತ್ರ ಸಂಖ್ಯೆ: F.No.14-5/2018 (DEB-I) ದಿನಾಂಕ: 14-08-2018, 25-10-2018 ರನ್ವಯ ಮಾನ್ಯತೆ ಪಡೆದಿರುತ್ತದೆ

ಕೃತಿಸ್ವಾಮ್ಯಗಳು © 2021 ಕರಾಮುವಿ ಮೈಸೂರು. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.